2 ರಾಜರು 10

ಆಗ ಯೇಹುವು ಬಾಳನಿಗೋಸ್ಕರ ದೊಡ್ಡಸಂಘವನ್ನು ಪರಿಶುದ್ಧ ಮಾಡಿರಿ ಅಂದನು.

2 Kings 10:20 (UKJV) And Jehu said, Proclaim a solemn assembly for Baal. And they proclaimed it.

18ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ-- ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು; ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು.

19ಆದದರಿಂದ ಬಾಳನ ಎಲ್ಲಾ ಪ್ರವಾದಿಗಳನ್ನೂ ಸೇವಕರನ್ನೂ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ; ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು ಅಂದನು. ಯಾಕಂದರೆ ಯೇಹುವು ಬಾಳನನ್ನು ಆರಾಧಿಸುವ ವರನ್ನು ನಾಶಮಾಡುವ ಹಾಗೆ ಇದನ್ನು ತಂತ್ರದಿಂದ ಮಾಡಿದನು.

20ಆಗ ಯೇಹುವು ಬಾಳನಿಗೋಸ್ಕರ ದೊಡ್ಡಸಂಘವನ್ನು ಪರಿಶುದ್ಧ ಮಾಡಿರಿ ಅಂದನು.

21ಹಾಗೆಯೇ ಅವರು ಅದನ್ನು ಸಾರಿದರು. ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೆ ಬಾಳನ ಮನೆಯು ಪೂರ್ಣವಾಗಿ ತುಂಬಿತ್ತು.

22ಆಗ ಅವನು ವಸ್ತ್ರಗಳ ಮನೆಯ ಮೇಲೆ ಇರುವವನಿಗೆ ಬಾಳನನ್ನು ಸೇವಿಸುವ ಎಲ್ಲರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಾ ಎಂದು ಹೇಳಿದ್ದರಿಂದ ಅವನು ಅವರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಂದನು.

Kannada Bible (Old Version), Bible Society of India.