16ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.
17ಅವನು ಸಮಾರ್ಯಕ್ಕೆ ಬಂದ ತರುವಾಯ ಸಮಾ ರ್ಯದಲ್ಲಿ ಕರ್ತನು ಎಲೀಯನಿಗೆ ಹೇಳಿದ ವಾಕ್ಯದ ಪ್ರಕಾರ ಅವನನ್ನು ನಾಶಮಾಡುವ ಪರ್ಯಂತರ ಅಹಾಬನಿಗೆ ಉಳಿದವರೆಲ್ಲರನ್ನು ಸಂಹರಿಸಿದನು.
18ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ-- ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು; ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು.
19ಆದದರಿಂದ ಬಾಳನ ಎಲ್ಲಾ ಪ್ರವಾದಿಗಳನ್ನೂ ಸೇವಕರನ್ನೂ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ; ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು ಅಂದನು. ಯಾಕಂದರೆ ಯೇಹುವು ಬಾಳನನ್ನು ಆರಾಧಿಸುವ ವರನ್ನು ನಾಶಮಾಡುವ ಹಾಗೆ ಇದನ್ನು ತಂತ್ರದಿಂದ ಮಾಡಿದನು.
20ಆಗ ಯೇಹುವು ಬಾಳನಿಗೋಸ್ಕರ ದೊಡ್ಡಸಂಘವನ್ನು ಪರಿಶುದ್ಧ ಮಾಡಿರಿ ಅಂದನು.