2 ರಾಜರು 10

ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.

2 Kings 10:16 (UKJV) And he said, Come with me, and see my zeal for the LORD. So they made him ride in his chariot.

14ಆಗ ಅವನು ಅವರನ್ನು ಜೀವದಿಂದ ಹಿಡಿಯಿರಿ ಎಂದು ಅವನು ಹೇಳಿದ್ದರಿಂದ ಅವರು ಇವರನ್ನು ಜೀವದಿಂದ ಹಿಡಿದು ಉಣ್ಣೆ ಕತ್ತರಿಸುವ ಮನೆಯ ಕುಣಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನೂ ಉಳಿಸಲಿಲ್ಲ.

15ಯೇಹುವು ಅಲ್ಲಿಂದ ಹೋಗಿ ತನ್ನನ್ನು ಎದುರು ಗೊಳ್ಳಲು ರೇಕಾಬನ ಮಗನಾದ ಯೆಹೋನಾದಾ ಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ--ನನ್ನ ಹೃದಯವು ನಿನ್ನ ಹೃದಯದೊಂದಿಗೆ ಇರುವಂತೆ ನಿನ್ನ ಹೃದಯವು ನನ್ನೊಂದಿಗೆ ಸರಿಯಾಗಿದೆಯೋ ಅಂದನು. ಯೆಹೋನಾದಾಬನು--ಅದೆ ಅಂದನು. ಹಾಗಾದರೆ ನಿನ್ನ ಕೈಕೊಡು ಅಂದನು. ಇವನು ತನ್ನ ಕೈಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಏರಿಸಿಕೊಂಡು ಅವ ನಿಗೆ--

16ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.

17ಅವನು ಸಮಾರ್ಯಕ್ಕೆ ಬಂದ ತರುವಾಯ ಸಮಾ ರ್ಯದಲ್ಲಿ ಕರ್ತನು ಎಲೀಯನಿಗೆ ಹೇಳಿದ ವಾಕ್ಯದ ಪ್ರಕಾರ ಅವನನ್ನು ನಾಶಮಾಡುವ ಪರ್ಯಂತರ ಅಹಾಬನಿಗೆ ಉಳಿದವರೆಲ್ಲರನ್ನು ಸಂಹರಿಸಿದನು.

18ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ-- ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು; ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು.

Kannada Bible (Old Version), Bible Society of India.