2 ರಾಜರು 2

ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನ ವರೆಗೂ ಹಾಗೆಯೇ ಇರುತ್ತದೆ.

2 Kings 2:22 (UKJV) So the waters were healed unto this day, according to the saying of Elisha which he spoke.

20ಅದಕ್ಕ ವನು--ನನ್ನ ಬಳಿಗೆ ಹೊಸ ಗಡಿಗೆಯನ್ನು ತಕ್ಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ ಅಂದನು. ಅವರು ಅದನ್ನು ಅವನ ಬಳಿಗೆ ತಕ್ಕೊಂಡು ಬಂದರು.

21ಅವನು ನೀರು ಬುಗ್ಗೆಯ ಬಳಿಗೆ ಹೊರಟುಹೋಗಿ ಅದರಲ್ಲಿ ಉಪ್ಪು ಹಾಕಿ ಹೇಳಿದ್ದೇನಂದರೆ--ಈ ನೀರನ್ನು ಶುದ್ಧ ಮಾಡಿದೆನು; ಇನ್ನು ಮೇಲೆ ಅದರಿಂದ ಮರಣವೂ ಬಂಜೆತನವೂ ಆಗದಿರಲೆಂದು ಕರ್ತನು ಹೇಳುತ್ತಾನೆ ಅಂದನು.

22ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನ ವರೆಗೂ ಹಾಗೆಯೇ ಇರುತ್ತದೆ.

23ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು.

24ಅವನು ಹಿಂದಿರುಗಿ ಅವರನ್ನು ನೋಡಿ--ಕರ್ತನ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯೊಳಗಿಂದ ಎರಡು ಹೆಣ್ಣು ಕರಡಿಗಳು ಹೊರಟು ಅವರಲ್ಲಿ ನಾಲ್ವತ್ತೆರಡು ಹುಡುಗ ರನ್ನು ಸೀಳಿಬಿಟ್ಟವು.

Kannada Bible (Old Version), Bible Society of India.