17ಆಗ ಅವನು--ನಾನು ನೋಡಿದ ಆ ಶಿರೋನಾಮವೇನು ಅಂದನು. ಅದಕ್ಕೆ ಆ ಪಟ್ಟಣದ ಜನರು ಅವನಿಗೆಯೆಹೂದದಿಂದ ಬಂದು ಬೇತೇಲಿನ ಬಲಿಪೀಠಕ್ಕೆ ವಿರೋಧವಾಗಿ ನೀನು ಮಾಡಿದ ಈ ಕಾರ್ಯಗಳನ್ನು ಸಾರಿ ಹೇಳಿದ ದೇವರ ಮನುಷ್ಯನ ಸಮಾಧಿ ಅಂದರು.
18ಆಗ ಅವನು--ಅವನನ್ನು ಬಿಟ್ಟುಬಿಡಿರಿ; ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ ಅಂದನು. ಹಾಗೆಯೇ ಅವರು ಅವನ ಎಲುಬುಗಳನ್ನು ಸಮಾರ್ಯ ದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಸುಮ್ಮನೆ ಬಿಟ್ಟರು.
19ಕೋಪವನ್ನೆಬ್ಬಿಸುವದಕ್ಕೆ ಇಸ್ರಾ ಯೇಲಿನ ಅರಸುಗಳು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ, ಕರ್ತನ ಕೋಪವನ್ನೆಬ್ಬಿಸಿದ ಉನ್ನತ ಸ್ಥಳಗಳ ಮನೆಗಳನ್ನೆಲ್ಲಾ ಯೋಷೀಯನು ಕೆಡವಿಹಾಕಿ ಬೇತೇಲಿ ನಲ್ಲಿ ತಾನು ಮಾಡಿದ ಎಲ್ಲಾ ಕ್ರಿಯೆಗಳ ಪ್ರಕಾರ ಅವುಗಳಿಗೆ ಮಾಡಿ,
20ಆ ಸ್ಥಳಗಳಲ್ಲಿದ್ದ ಉನ್ನತ ಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ತಿರಿಗಿ ಬಂದನು.
21ಅರಸನು ಎಲ್ಲಾ ಜನರಿಗೂ--ಈ ಒಡಂಬಡಿಕೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆಯೇ ನಿಮ್ಮ ದೇವ ರಾದ ಕರ್ತನ ಪಸ್ಕವನ್ನು ಆಚರಿಸಿರಿ ಎಂದು ಆಜ್ಞಾಪಿ ಸಿದನು.