2 ರಾಜರು 3

ಅವರು ಇಸ್ರಾಯೇಲಿನ ದಂಡಿಗೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಹೊಡೆದು ಮೋವಾಬ್ಯರನ್ನು ಅವರ ದೇಶದ ವರೆಗೂ ಹೊಡೆಯುತ್ತಾ ಬಂದರು.

2 Kings 3:24 (UKJV) And when they came to the camp of Israel, the Israelites rose up and stroke the Moabites, so that they fled before them: but they went forward smiting the Moabites, even in their country.

22ಮೋವಾಬ್ಯರು ಉದಯಕಾಲದಲ್ಲಿ ಎದ್ದು ಆ ನೀರಿನ ಮೇಲೆ ಸೂರ್ಯನ ಪ್ರಕಾಶ ಬಿದ್ದದ್ದರಿಂದ ಆ ನೀರು ರಕ್ತದ ಹಾಗೆ ಕೆಂಪಾಗಿರುವದನ್ನು ಕಂಡರು.

23ಆಗ ಅವರು--ಇದು ರಕ್ತವೇ; ಆ ಅರಸುಗಳು ತಮ್ಮ ತಮ್ಮೊ ಳಗೆ ಜಗಳವಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ; ಈಗ ಮೋವಾಬ್ಯರೇ, ಕೊಳ್ಳೆಗೆ ಬನ್ನಿರಿ ಎಂದು ಹೇಳಿ ಕೊಂಡರು.

24ಅವರು ಇಸ್ರಾಯೇಲಿನ ದಂಡಿಗೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಹೊಡೆದು ಮೋವಾಬ್ಯರನ್ನು ಅವರ ದೇಶದ ವರೆಗೂ ಹೊಡೆಯುತ್ತಾ ಬಂದರು.

25ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.

26ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಮೋವಾಬಿನ ಅರಸನು ಕಂಡಾಗ ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ ಕತ್ತಿ ಹಿಡಿಯುವ ಏಳುನೂರು ಮಂದಿ ಯನ್ನು ತನ್ನ ಸಂಗಡ ತೆಗೆದುಕೊಂಡನು; ಆದರೆ ಅದು ಅವರಿಂದ ಆಗದೆ ಹೋಯಿತು.

Kannada Bible (Old Version), Bible Society of India.