2 ರಾಜರು 4

ಆದರೆ ಆ ಮಗುವು ಬೆಳೆದಾಗ ಒಂದು ದಿನ ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು.

2 Kings 4:18 (UKJV) And when the child was grown, it fell upon a certain day, that he went out to his father to the reapers.

16ಆಗ ಅವನು--ನೀನು ಬರುವ ವರುಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಳ್ಳುವಿ ಅಂದನು. ಅದಕ್ಕವಳುಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಳಿಗೆ ನೀನು ಸುಳ್ಳು ಹೇಳಬೇಡ ಅಂದಳು.

17ಆ ಸ್ತ್ರೀಯು ಗರ್ಭಧರಿಸಿ ಎಲೀಷನು ತನಗೆ ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.

18ಆದರೆ ಆ ಮಗುವು ಬೆಳೆದಾಗ ಒಂದು ದಿನ ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು.

19ಆಗ ಅವನು ತನ್ನ ತಂದೆಗೆ--ನನ್ನ ತಲೆ, ನನ್ನ ತಲೆ ಅಂದನು. ತಂದೆಯು ಒಬ್ಬ ಹುಡುಗನಿಗೆ--ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು ಅಂದನು.

20ಹುಡು ಗನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದ ವರೆಗೂ ಅವಳ ತೊಡೆಯ ಮೇಲೆ ಇದ್ದುಕೊಂಡು ಸತ್ತುಹೋದನು.

Kannada Bible (Old Version), Bible Society of India.