13ಆಗ ಅವನು--ನಾನು ಕಳುಹಿಸಿ ಅವನನ್ನು ಹಿಡಿಯುವ ಹಾಗೆ ನೀನು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ ಅಂದನು. ಆಗ ಇಗೋ, ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.
14ಆದದರಿಂದ ಅವನು ಅಲ್ಲಿಗೆ ಕುದುರೆ ಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿ ದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
15ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ ಇಗೋ, ಕುದುರೆಗಳೂ ರಥಗಳುಳ್ಳ ಸೈನ್ಯವೂ ಪಟ್ಟಣವನ್ನು ಸುತ್ತಿಕೊಂಡಿತು. ಆಗ ಆ ಸೇವಕನು ಅವನಿಗೆ--ಅಯ್ಯೋ, ನನ್ನ ಯಜಮಾನನೇ, ನಾವು ಏನು ಮಾಡು ವದು ಅಂದನು.
16ಅದಕ್ಕವನು--ಭಯಪಡಬೇಡ; ಅವರ ಸಂಗಡ ಇರುವವರಿಗಿಂತ ನಮ್ಮ ಸಂಗಡ ಇರುವ ವರು ಹೆಚ್ಚಾಗಿದ್ದಾರೆ ಅಂದನು.
17ಆಗ ಎಲೀಷನುಕರ್ತನೇ, ನೀನು ದಯಮಾಡಿ ಅವನು ನೋಡುವ ಹಾಗೆ ಅವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಿ ದನು. ಕರ್ತನು ಆ ಯೌವನಸ್ಥನ ಕಣ್ಣುಗಳನ್ನು ತೆರೆ ದಾಗ ಇಗೋ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ಕುದುರೆಗಳೂ ರಥಗಳೂ ತುಂಬಿರುವದನ್ನು ಅವನು ನೋಡಿದನು.