2 ರಾಜರು 8

ಆಗ ಇವನು ನಾಚಿಕೆಪಡುವ ವರೆಗೆ ದೇವರ ಮನುಷ್ಯನು ತನ್ನ ಮುಖವನ್ನು ಸ್ಥಿರಪಡಿಸಿ ಅತ್ತನು.

2 Kings 8:11 (UKJV) And he settled his countenance steadfastly, until he was ashamed: and the man of God wept.

9ಹಾಗೆಯೇ ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮ ವಾದವುಗಳಲ್ಲಿ ನಾಲ್ವತ್ತು ಒಂಟೆಗಳು ಹೊರುವಷ್ಟನ್ನು ಕಾಣಿಕೆಯೊಂದಿಗೆ ಅವನನ್ನು ಎದುರುಗೊಳ್ಳಲು ಹೋಗಿ ಅವನ ಮುಂದೆ ಬಂದು ನಿಂತು--ಅರಾಮ್ಯರ ಅರಸನಾಗಿರುವ ನಿನ್ನ ಮಗನಾದ ಬೆನ್ಹದದನು--ಈ ವ್ಯಾಧಿಯಿಂದ ನಾನು ಬದುಕುವೆನೋ ಇಲ್ಲವೋ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಅಂದನು.

10ಅದಕ್ಕೆ ಎಲೀಷನು--ಅವನಿಗೆ ನಿಜ ವಾಗಿಯೂ ಸ್ವಸ್ಥನಾಗುವಿ ಎಂದು ಹೋಗಿ ಹೇಳು; ಆದರೆ ಅವನು ನಿಜವಾಗಿ ಸಾಯುವನೆಂದು ಕರ್ತನು ನನಗೆ ತೋರಿಸಿದ್ದಾನೆ ಅಂದನು.

11ಆಗ ಇವನು ನಾಚಿಕೆಪಡುವ ವರೆಗೆ ದೇವರ ಮನುಷ್ಯನು ತನ್ನ ಮುಖವನ್ನು ಸ್ಥಿರಪಡಿಸಿ ಅತ್ತನು.

12ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್‌ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.

13ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.

Kannada Bible (Old Version), Bible Society of India.