2 ರಾಜರು 8

ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.

2 Kings 8:13 (UKJV) And Hazael said, But what, is your servant a dog, that he should do this great thing? And Elisha answered, The LORD has showed me that you shall be king over Syria.

11ಆಗ ಇವನು ನಾಚಿಕೆಪಡುವ ವರೆಗೆ ದೇವರ ಮನುಷ್ಯನು ತನ್ನ ಮುಖವನ್ನು ಸ್ಥಿರಪಡಿಸಿ ಅತ್ತನು.

12ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್‌ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.

13ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.

14ಅವನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಇವನು ಅವನಿಗೆ--ಎಲೀಷನು ನಿನಗೆ ಏನು ಹೇಳಿದ ನೆಂದು ಕೇಳಿದ್ದಕ್ಕೆ ಅವನು--ನೀನು ನಿಜವಾಗಿ ಸ್ವಸ್ಥನಾ ಗುವಿ ಎಂದು ನನಗೆ ಹೇಳಿದನು ಅಂದನು. ಮಾರನೇ ದಿವಸದಲ್ಲಿ ಏನಾಯಿತಂದರೆ,

15ಅವನು ದಪ್ಪ ಬಟ್ಟೆ ಯನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಅವನ ಮುಖದ ಮೇಲೆ ಹಾಕಿದ್ದರಿಂದ ಅವನು ಸತ್ತನು. ಹೀಗೆ ಹಜಾ ಯೇಲನು ಅವನಿಗೆ ಬದಲಾಗಿ ಅರಸನಾದನು.

Kannada Bible (Old Version), Bible Society of India.