2 ರಾಜರು 9

ಅವರು ಅವಳನ್ನು ಹೂಣಿಡಲು ಹೋದಾಗ ಅವಳ ತಲೆ ಬುರುಡೆಯೂ ಕಾಲುಗಳೂ ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಅವರು ತಿರಿಗಿ ಬಂದು ಅವನಿಗೆ ತಿಳಿಸಿದರು.

2 Kings 9:35 (UKJV) And they went to bury her: but they found no more of her than the skull, and the feet, and the palms of her hands.

33ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು.

34ಅವನು ಒಳಗೆ ಹೋಗಿ ತಿಂದು ಕುಡಿದ ಮೇಲೆ ಅವರಿಗೆ -- ನೀವು ಹೋಗಿ ಆ ಶಪಿಸಲ್ಪಟ್ಟವಳನ್ನು ನೋಡಿಕೊಂಡು ಹೂಣಿಡಿರಿ; ಅವಳು ಅರಸನ ಮಗಳು ಅಂದನು.

35ಅವರು ಅವಳನ್ನು ಹೂಣಿಡಲು ಹೋದಾಗ ಅವಳ ತಲೆ ಬುರುಡೆಯೂ ಕಾಲುಗಳೂ ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಅವರು ತಿರಿಗಿ ಬಂದು ಅವನಿಗೆ ತಿಳಿಸಿದರು.

36ಅದಕ್ಕವನುಕರ್ತನು ತನ್ನ ಸೇವಕನಾಗಿರುವ ತಿಷ್ಬೀಯನಾದ ಎಲೀ ಯನ ಮುಖಾಂತರ ಹೇಳಿದ ವಾಕ್ಯವು ಇದೇ--ಇಜ್ರೇಲಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವವು.

37ಇದಲ್ಲದೆ ಇದೇ ಈಜೆ ಬೆಲಳೆಂದು ಹೇಳಕೂಡದ ಹಾಗೆ ಇಜ್ರೇಲಿನ ಪಾಲಿನ ಹೊಲದ ಮೇಲ್ಭಾಗದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವದು ಎಂಬದೇ.

Kannada Bible (Old Version), Bible Society of India.