11 ಬೆನ್ಯಾವಿಾನನ ಕುಲದವನಾದ ಬಿಕ್ರೀಯಮಗನಾಗಿರುವ ಶೆಬನೆಂಬ ಹೆಸರುಳ್ಳ ಬೆಲಿಯಾಳನವನಾದ ಒಬ್ಬನು ಅಲ್ಲಿದ್ದನು. ಅವನು ತುತೂರಿಯನ್ನು ಊದಿ--ನಮಗೆ ದಾವೀದನಲ್ಲಿ ಪಾಲಿಲ್ಲ; ಇಷಯನ ಮಗನಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಓ ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ ಅಂದನು.
2ಇಸ್ರಾಯೇಲ್ ಜನರೆಲ್ಲರು ದಾವೀದನನ್ನು ಬಿಟ್ಟು ಸರಿದು ಬಿಕ್ರೀಯ ಮಗನಾದ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನ ವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.
3ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು; ಅರಸನು ಮನೆಯಲ್ಲಿ ಕಾಯಲಿಟ್ಟ ಉಪಪತ್ನಿಗಳಾದ ಹತ್ತುಮಂದಿ ಸ್ತ್ರೀಯರನ್ನು ತೆಗೆದು ಕೊಂಡು ಅವರನ್ನು ಒಂದು ಕಾವಲಿನಲ್ಲಿ ಇರಿಸಿ ಸಾಕುತ್ತಿದ್ದನು. ಆದರೆ ಅವರನ್ನು ತಿರುಗಿ ಕೂಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದ ವರೆಗೂ ಕಾವಲಲ್ಲಿ ಇರಿಸಲ್ಪಟ್ಟು ವಿಧವೆಯರ ಹಾಗೆಯೇ ಬದುಕಿದರು.
4ಅರಸನು ಅಮಾಸನಿಗೆ--ನೀನು ಮೂರು ದಿವಸ ಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ಇಲ್ಲಿ ಇರು ಅಂದನು.