12ಭೂಮಿಯ ಮೇಲಿ ರುವ ನಾಲ್ಕು ಕಾಲುಗಳುಳ್ಳ ಎಲ್ಲಾ ತರವಾದ ಪಶು ಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟ ಗಳೂ ಆಕಾಶದ ಪಕ್ಷಿಗಳೂ ಅದರೊಳಗೆ ಇದ್ದವು.
13ಆಗ--ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ಹೇಳುವ ಒಂದು ಧ್ವನಿಯು ಅವನಿಗೆ ಕೇಳಿಸಿತು.
14ಅದಕ್ಕೆ ಪೇತ್ರನು--ಕರ್ತನೇ, ಹಾಗಲ್ಲ, ನಾನೆಂದೂ ಹೊಲೆಯಾದ ಪದಾರ್ಥವನ್ನಾಗಲೀ ಅಶುದ್ಧ ಪದಾ ರ್ಥವನ್ನಾಗಲೀ ತಿಂದವನಲ್ಲ ಅಂದನು.
15ದೇವರು ಶುದ್ಧಮಾಡಿದ್ದನ್ನು ನೀನು ಹೊಲೆಯೆನ್ನಬೇಡ ಎಂದು ತಿರಿಗಿ ಎರಡನೆಯ ಸಾರಿ ಅವನಿಗೆ ಹೇಳುವ ಧ್ವನಿಯು ಕೇಳಿಸಿತು.
16ಹೀಗೆ ಮೂರು ಸಾರಿ ಆಯಿತು. ತರು ವಾಯ ಆ ಪಾತ್ರೆಯು ಪುನಃ ಆಕಾಶದೊಳಗೆ ಸೇರಿ ಕೊಂಡಿತು.