1ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು.
2ನಾವು ಆಸ್ಯದ ತೀರಗಳ ಮಾರ್ಗವಾಗಿ ಪ್ರಯಾಣಮಾಡ ಬೇಕೆಂಬ ಉದ್ದೇಶದಿಂದ ಅದ್ರಮಿತ್ತಿಯ ಹಡಗನ್ನು ಹತ್ತಿ ಸಮುದ್ರ ಪ್ರಯಾಣವನ್ನು ಪ್ರಾರಂಭಿಸಿದೆವು ಆಗ ಥೆಸಲೊನೀಕದ ಮಕೆದೋನ್ಯದವನಾದ ಅರಿ ಸ್ತಾರ್ಕನು ನಮ್ಮೊಂದಿಗೆ ಇದ್ದನು.
3ನಾವು ಮರುದಿನ ಸೀದೋನಿಗೆ ಸೇರಿದೆವು; ಆಗ ಯೂಲ್ಯನು ದಯೆ ತೋರಿಸಿ ಪೌಲನನ್ನು ಒತ್ತಾಯ ಮಾಡಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗಿ ವಿಶ್ರಮಿಸಿಕೊಳ್ಳುವಂತೆ ಸ್ವಾತಂತ್ರ್ಯವಾಗಿ ಬಿಟ್ಟನು.