9ಆಗ ಕರ್ತನು ನನಗೆ--ಮೋವಾಬ್ಯರಿಗೆ ಉಪದ್ರಕೊಡಬೇಡ; ಅವರ ಸಂಗಡ ಜಗಳವಾಡಿ ಯುದ್ಧಮಾಡಬೇಡ; ನಾನು ಅವರ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ; ನಾನು ಆರ್ ಅನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲವೇ ಅಂದನು.
10ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.
11ಅವರು ಅನಾಕ್ಯರ ಹಾಗೆ ಮಹಾಶರೀರಗಳೆನ್ನಿಸಿಕೊಂಡರು; ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.
12ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
13ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ ಅಂದಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.