15ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.
16ಅದು ಚಚ್ಚೌಕವಾಗಿಯೂ ಇಮ್ಮಡಿ ಸಿದ್ದಾಗಿಯೂ ಇದ್ದು ಗೇಣುದ್ದವಾಗಿಯೂ ಗೇಣಗಲ ವಾಗಿಯೂ ಇರಬೇಕು.
17ನೀನು ಅದರಲ್ಲಿ ನಾಲ್ಕು ಕಲ್ಲುಗಳ ನಾಲ್ಕು ಸಾಲುಗಳಾಗಿ ಕಲ್ಲು ಜವೆಗಳನ್ನು ಮಾಡಬೇಕು; ಮೊದಲನೆಯ ಸಾಲಿನಲ್ಲಿ ಪದ್ಮರಾಗ ಗೋಮೇಧಕ ಮಾಣಿಕ್ಯಗಳಿರಬೇಕು. ಇದೇ ಮೊದಲ ನೆಯ ಸಾಲು.
18ಎರಡನೆಯ ಸಾಲಿನಲ್ಲಿ ಪಚ್ಚೆ ನೀಲ ವಜ್ರ ಇರಬೇಕು.
19ಮೂರನೆಯ ಸಾಲಿನಲ್ಲಿ ಸುವರ್ಣ ವೈದೂರ್ಯ ಸುಗಂಧಿಗಳಿರಬೇಕು.