11ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ ನದಿಯಲ್ಲಿ ಮಾತ್ರ ಅವು ಉಳಿಯುವವು ಅಂದನು.
12ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು.
13ಮೋಶೆ ಹೇಳಿದ ಪ್ರಕಾರ ಕರ್ತನು ಮಾಡಿದನು. ಮನೆಗಳಲ್ಲಿಯೂ ಹಳ್ಳಿಗಳ ಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು.
14ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.
15ಆದರೆ ಫರೋಹನು ತನಗೆ ಉಪಶಮನವಾಯಿತೆಂದು ತಿಳಿ ದಾಗ ಕರ್ತನು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣಮಾಡಿಕೊಂಡು ಅವರ ಮಾತನ್ನು ಕೇಳಲಿಲ್ಲ.