ಪುರಾತನಾದಿಕಾಂಡ 8

ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು.

Exodus 8:12 (UKJV) And Moses and Aaron went out from Pharaoh: and Moses cried unto the LORD because of the frogs which he had brought against Pharaoh.

10ಅವನು ಮೋಶೆಗೆ--ನಾಳೆ ಅಂದನು. ಆಗ ಮೋಶೆಯು--ನಮ್ಮ ದೇವರಾಗಿರುವ ಕರ್ತನ ಹಾಗೆ ಯಾರು ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ನಿನ್ನ ಮಾತಿನ ಪ್ರಕಾರ ಆಗಲಿ.

11ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ ನದಿಯಲ್ಲಿ ಮಾತ್ರ ಅವು ಉಳಿಯುವವು ಅಂದನು.

12ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು.

13ಮೋಶೆ ಹೇಳಿದ ಪ್ರಕಾರ ಕರ್ತನು ಮಾಡಿದನು. ಮನೆಗಳಲ್ಲಿಯೂ ಹಳ್ಳಿಗಳ ಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು.

14ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.

Kannada Bible (Old Version), Bible Society of India.