8ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ ಆದದ್ದೇನಂದರೆ, ಫಿಲಿಷ್ಟಿಯರ ಅರಸನಾದ ಅಬೀಮೆಲೆ ಕನು ಕಿಟಕಿಯಿಂದ ನೋಡುತ್ತಿದಾಗ ಅಗೋ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುತ್ತಿದ್ದನು.
9ಆಗ ಅಬೀಮೆಲೆಕನು ಇಸಾಕ ನನ್ನು ಕರೆದು--ಅಗೋ, ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು--ಆಕೆಯು ನನ್ನ ತಂಗಿ ಎಂದು ಯಾಕೆ ಹೇಳಿದಿ ಅಂದನು. ಇಸಾಕನು ಅವನಿಗೆ--ನಾನು ಆಕೆಯ ನಿಮಿತ್ತ ಸಾಯಬಾರ ದೆಂದು ಹಾಗೆ ಹೇಳಿದೆನು ಅಂದನು.
10ಆಗ ಅಬೀಮೆಲೆಕನು--ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯ ಸಂಗಡ ಮಲಗಿದ್ದರೆ ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ ಅಂದನು.
11ಅಬೀಮೆಲೆಕನು ತನ್ನ ಜನರಿಗೆಲ್ಲಾ--ಈ ಮನುಷ್ಯನನ್ನಾಗಲಿ ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು ಎಂದು ಅಪ್ಪಣೆಕೊಟ್ಟನು.
12ಇದಲ್ಲದೆ ಇಸಾಕನು ಆ ದೇಶದಲ್ಲಿ ಬಿತ್ತಿದ ವರುಷದಲ್ಲಿಯೇ ನೂರರಷ್ಟು ಫಲವನ್ನು ಹೊಂದಿ ದನು. ಕರ್ತನು ಅವನನ್ನು ಆಶೀರ್ವದಿಸಿದನು.