ಆದಿಕಾಂಡ 29

ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು.

Genesis 29:22 (UKJV) And Laban gathered together all the men of the place, and made a feast.

20ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು.

21ತರುವಾಯ ಯಾಕೋಬನು ಲಾಬಾನನಿಗೆ--ನನ್ನ ದಿನಗಳು ಪೂರ್ತಿಯಾದವು; ನಾನು ನನ್ನ ಹೆಂಡತಿಯ ಬಳಿಗೆ ಹೋಗುವ ಹಾಗೆ ಆಕೆಯನ್ನು ನನಗೆ ಕೊಡು ಅಂದನು.

22ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು.

23ಸಾಯಂಕಾಲದಲ್ಲಿ ಅವನು ತನ್ನ ಮಗಳಾದ ಲೇಯಳನ್ನು ಅವನ ಬಳಿಗೆ ಕರೆತಂದನು. ಆಗ ಅವನು ಆಕೆಯ ಬಳಿಗೆ ಬಂದನು.

24ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಾಳನ್ನು ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು.

Kannada Bible (Old Version), Bible Society of India.