ಹಬಕ್ಕೂಕು 3

ಆತನ ಪ್ರಕಾಶವು ಬೆಳಕಿನ ಹಾಗಿತ್ತು; ಆತನಿಗೆ ತನ್ನ ಕೈಯೊಳಗಿಂದ ಕೊಂಬುಗಳು ಬಂದವು; ಅಲ್ಲಿ ಆತನ ಅಧಿಕಾರವನ್ನು ಮರೆಮಾಡುವದಾಗಿತ್ತು.

Habakkuk 3:4 (UKJV) And his brightness was as the light; he had horns coming out of his hand: and there was the hiding of his power.

2ಕರ್ತನೇ, ವರುಷ ಗಳ ಮಧ್ಯದಲ್ಲಿ ನಿನ್ನ ಕೆಲಸವನ್ನು ಉಜ್ಜೀವಿಸಮಾಡು. ವರುಷಗಳ ಮಧ್ಯದಲ್ಲಿ ತಿಳಿಯಮಾಡು, ರೌದ್ರದಲ್ಲಿ ಕರುಣೆಯನ್ನು ಜ್ಞಾಪಕಮಾಡು;

3ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್‌ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.

4ಆತನ ಪ್ರಕಾಶವು ಬೆಳಕಿನ ಹಾಗಿತ್ತು; ಆತನಿಗೆ ತನ್ನ ಕೈಯೊಳಗಿಂದ ಕೊಂಬುಗಳು ಬಂದವು; ಅಲ್ಲಿ ಆತನ ಅಧಿಕಾರವನ್ನು ಮರೆಮಾಡುವದಾಗಿತ್ತು.

5ಆತನ ಮುಂದೆ ಜಾಡ್ಯವು ಹೋಯಿತು. ಆತನ ಕಾಲುಗಳಿಂದ ಉರಿ ಕೆಂಡಗಳು ಹೊರಟವು.

6ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ.

Kannada Bible (Old Version), Bible Society of India.