8ಗಿಬ್ಯದಲ್ಲಿ ಕೊಂಬನ್ನೂ ರಾಮದಲ್ಲಿ ತುತೂರಿ ಯನ್ನೂದಿರಿ; ಓ ಬೆನ್ಯಾವಿಾನೇ ನಿನ್ನ ಹಿಂದೆ ಬೆತಾ ವೇನಿನಲ್ಲಿ ಗಟ್ಟಿಯಾಗಿ ಕೂಗು;
9ಎಫ್ರಾಯಾಮು ಗದರಿಸುವ ದಿನದಲ್ಲೇ ಹಾಳಾಗುವದು. ಇಸ್ರಾಯೇ ಲಿನ ಗೋತ್ರಗಳಲ್ಲಿ ನಾನು ನಿಜವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
10ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.
11ಎಫ್ರಾಯಾಮು ಆಜ್ಞೆಯಂತೆ ಇಷ್ಟ ಪೂರ್ವಕವಾಗಿ ನಡೆದ ಕಾರಣ ಅವನು ನ್ಯಾಯತೀರ್ಪಿನೊಳಗೆ ಕುಂದಿ ಹೋಗಿ ಜಜ್ಜಲ್ಪಟ್ಟನು.
12ಆದದರಿಂದ ನಾನು ಎಫ್ರಾ ಯಾಮಿಗೆ ನುಸಿಯ ಹಾಗೆಯೂ ಯೆಹೂದದ ಮನೆ ತನದವರಿಗೆ ಕೊಳೆಯುವಿಕೆಯ ಹಾಗೆಯೇ ಇರುವೆನು.