7ದ್ರೋಹದಿಂದ ಅವರು ಕರ್ತನಿಗೆ ವಿರುದ್ಧವಾಗಿ ನಡೆಸಿದ್ದಾರೆ. ಯಾಕಂದರೆ ಅವರು ಅನ ್ಯಮಕ್ಕಳನ್ನು ಪಡೆದಿದ್ದಾರೆ. ಈಗ ತಿಂಗಳು ತಮ್ಮ ಪಾಲು ಗಳೊಂದಿಗೆ ಅವರನ್ನು ನುಂಗಿ ಬಿಡುವದು.
8ಗಿಬ್ಯದಲ್ಲಿ ಕೊಂಬನ್ನೂ ರಾಮದಲ್ಲಿ ತುತೂರಿ ಯನ್ನೂದಿರಿ; ಓ ಬೆನ್ಯಾವಿಾನೇ ನಿನ್ನ ಹಿಂದೆ ಬೆತಾ ವೇನಿನಲ್ಲಿ ಗಟ್ಟಿಯಾಗಿ ಕೂಗು;
9ಎಫ್ರಾಯಾಮು ಗದರಿಸುವ ದಿನದಲ್ಲೇ ಹಾಳಾಗುವದು. ಇಸ್ರಾಯೇ ಲಿನ ಗೋತ್ರಗಳಲ್ಲಿ ನಾನು ನಿಜವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
10ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.
11ಎಫ್ರಾಯಾಮು ಆಜ್ಞೆಯಂತೆ ಇಷ್ಟ ಪೂರ್ವಕವಾಗಿ ನಡೆದ ಕಾರಣ ಅವನು ನ್ಯಾಯತೀರ್ಪಿನೊಳಗೆ ಕುಂದಿ ಹೋಗಿ ಜಜ್ಜಲ್ಪಟ್ಟನು.