ಹೊಶೇಯ 5

ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ; ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು; ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ.

Hosea 5:4 (UKJV) They will not frame their doings to turn unto their God: for the spirit of whoredoms is in the midst of them, and they have not known the LORD.

2ನಾನು ಅವರನ್ನು ಗದರಿಸಿದ್ದಾಗ್ಯೂ ನನಗೆ ತಿರುಗಿಬಿದ್ದವರು ಕೊಲೆಯನ್ನು ಮಾಡುವದರಲ್ಲಿ ಮಗ್ನರಾಗಿದ್ದಾರೆ.

3ನಾನು ಎಫ್ರಾಯಾಮನ್ನು ಬಲ್ಲೆನು ಮತ್ತು ಇಸ್ರಾ ಯೇಲು ನನಗೆ ಮರೆಯಾಗಿಲ್ಲ; ಓ ಎಫ್ರಾಯಾಮೇ, ನೀನು ಈಗಲೇ ವ್ಯಭಿಚಾರಮಾಡುತ್ತೀ, ಇಸ್ರಾಯೇಲು ಸಹ ಅಪವಿತ್ರವಾಯಿತು.

4ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ; ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು; ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ.

5ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ. ಆದದರಿಂದ ಇಸ್ರಾಯೇಲು ಮತ್ತು ಎಫ್ರಾಯಾಮು ತಮ್ಮ ಕೆಟ್ಟ ತನದಲ್ಲಿ ಬೀಳುವವು. ಯೆಹೂದವು ಅವರೊಂದಿಗೆ ಬೀಳುವದು.

6ಅವರು ಕರ್ತನನ್ನು ಹುಡುಕುವದಕ್ಕೆ ಅವರ ಮಂದೆಗಳೊಂದಿಗೂ ಹಿಂಡುಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡ ಕಾರಣ ಅವರು ಆತನನ್ನು ಕಾಣುವದೇ ಇಲ್ಲ.

Kannada Bible (Old Version), Bible Society of India.