20ನಿಶ್ಚಯವಾಗಿ ಹೆಂಡತಿಯು ತನ್ನ ಗಂಡನನ್ನು ವಂಚಿಸಿ ಬಿಡುವ ಪ್ರಕಾರ ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
21ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಲ್ಪಟ್ಟಿತು, ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿ ಕೆಗಳೇ; ಯಾಕಂದರೆ ತಮ್ಮ ಮಾರ್ಗವನ್ನು ಡೊಂಕು ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತುಬಿಟ್ಟಿ ದ್ದರು.
22ಹಿಂಜರಿದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಹಿಂಜರಿಯುವಿಕೆಯನ್ನು ನಾನು ಸ್ವಸ್ಥಮಾಡುವೆನು ಎಂದು ಕರ್ತನು ಅನ್ನುತ್ತಾನೆ. ಇಗೋ, ನಿನ್ನ ಬಳಿಗೆ ಬರುತ್ತೇವೆ; ನೀನು ದೇವರಾದ ನಮ್ಮ ಕರ್ತನಾಗಿದ್ದೀ.
23ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಸಮೂ ಹದಿಂದಲೂ ರಕ್ಷಣೆ ವ್ಯರ್ಥವಾಗಿದೆ; ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಕರ್ತನಲ್ಲಿಯೇ ಇದೆ.
24ನಾಚಿಕೆಯಾದದ್ದು ನಮ್ಮ ಯೌವನದಾರಭ್ಯ ನಮ್ಮ ತಂದೆಗಳ ಕಷ್ಟವನ್ನೂ ಅವರ ಕುರಿಗಳನ್ನೂ ದನಗಳನ್ನೂ ಕುಮಾರರನ್ನೂ, ಕುಮಾ ರ್ತೆಯರನ್ನೂ ತಿಂದುಬಿಟ್ಟಿದೆ.