ಯಿರ್ಮಿಯ 38

ನೀನು ಅವರಿಗೆ--ನನ್ನನ್ನು ತಿರುಗಿ ಯೋನಾತಾನನ ಮನೆಯಲ್ಲಿ ಸಾಯುವ ಹಾಗೆ ತಕ್ಕೊಂಡು ಹೋಗ ಬೇಡವೆಂದು ಅರಸನ ಮುಂದೆ ಬಿನ್ನಹ ಮಾಡಿದೆನೆಂದು ಹೇಳು ಅಂದನು.

Jeremiah 38:26 (UKJV) Then you shall say unto them, I presented my supplication before the king, that he would not cause me to return to Jonathan's house, to die there.

24ಆಗ ಚಿದ್ಕೀಯನು ಯೆರೆವಿಾಯನಿಗೆ ಹೇಳಿದ್ದೇನಂದರೆ--ನೀನು ಸಾಯದ ಹಾಗೆ ಈ ಮಾತುಗಳನ್ನು ಯಾರಿಗೂ ತಿಳಿಸಬಾರದು.

25ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿ ದ್ದೇನೆಂದು ಕೇಳಿ ನಿನ್ನ ಬಳಿಗೆ ಬಂದು--ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು; ನಾವು ನಿನ್ನನ್ನು ಕೊಂದುಹಾಕುವದಿಲ್ಲ; ಅರಸನು ನಿನ್ನ ಸಂಗಡ ಮಾತಾ ಡಿದ್ದನ್ನು ಸಹ ತಿಳಿಸು ಎಂದು ಹೇಳಿದರೆ--

26ನೀನು ಅವರಿಗೆ--ನನ್ನನ್ನು ತಿರುಗಿ ಯೋನಾತಾನನ ಮನೆಯಲ್ಲಿ ಸಾಯುವ ಹಾಗೆ ತಕ್ಕೊಂಡು ಹೋಗ ಬೇಡವೆಂದು ಅರಸನ ಮುಂದೆ ಬಿನ್ನಹ ಮಾಡಿದೆನೆಂದು ಹೇಳು ಅಂದನು.

27ಆಗ ಪ್ರಧಾನರೆಲ್ಲರೂ ಯೆರೆವಿಾಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು; ಆಗ ಅವರು ಸುಮ್ಮನಾದರು; ಆ ಕಾರ್ಯದ ವಿಷಯ ವನ್ನು ಅವರು ಗ್ರಹಿಸಲಿಲ್ಲ.

28ಈ ಪ್ರಕಾರ ಯೆರೂ ಸಲೇಮು ಹಿಡಿಯಲ್ಪಡುವ ದಿವಸದ ವರೆಗೆ ಯೆರೆ ವಿಾಯನು ಸೆರೆಮನೆಯ ಅಂಗಳದಲ್ಲಿ ವಾಸವಾ ಗಿದ್ದನು; ಯೆರೂಸಲೇಮು ಹಿಡಿಯಲ್ಪಡುವಾಗ ಅವನು ಅಲ್ಲೇ ಇದ್ದನು.

Kannada Bible (Old Version), Bible Society of India.