29ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ.
30ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ.
31ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು.
32ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ.
33ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು.