ಯೋಬು 16

ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ; ನನ್ನ ಕೂಗಿಗೆ ಸ್ಥಳ ಇಲ್ಲದೆ ಇರಲಿ.

Job 16:18 (UKJV) O earth, cover not you my blood, and let my cry have no place.

16ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;

17ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ.

18ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ; ನನ್ನ ಕೂಗಿಗೆ ಸ್ಥಳ ಇಲ್ಲದೆ ಇರಲಿ.

19ಈಗ ಇಗೋ, ಆಕಾಶದಲ್ಲಿ ನನ್ನ ಸಾಕ್ಷಿ ಉಂಟು; ನನ್ನ ಸಾಕ್ಷಿಯು ಉನ್ನತದಲ್ಲಿ ಅದೆ.

20ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ.

Kannada Bible (Old Version), Bible Society of India.