9ನನ್ನ ಘನತೆಯನ್ನು ನನ್ನಲ್ಲಿಂದ ಸುಲಿದುಕೊಂಡನು; ನನ್ನ ತಲೆಯ ಕಿರೀ ಟವನ್ನು ತೆಗೆದುಹಾಕಿದನು.
10ಸುತ್ತಲೂ ನನ್ನನ್ನು ನಾಶ ಪಡಿಸಿದ್ದರಿಂದ ನಾನು ಹೋಗುತ್ತೇನೆ; ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟನು.
11ಆತನ ಕೋಪವು ನನ್ನ ಮೇಲೆ ಹೊತ್ತಿ ಅದೆ; ತನ್ನ ವೈರಿಗಳ ಹಾಗೆ ನನ್ನನ್ನು ಎಣಿಸುತ್ತಾನೆ.
12ಆತನ ಗುಂಪುಗಳು ಸಹ ಬಂದು ನನಗೆ ವಿರೋಧವಾಗಿ ತಮ್ಮ ಮಾರ್ಗ ಕಟ್ಟುತ್ತವೆ. ನನ್ನ ಗುಡಾರದ ಸುತ್ತುದಂಡು ಇಳಿಯುತ್ತದೆ.
13ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು.