ಯೋಬು 19

ನನ್ನ ಶ್ವಾಸವು ನನ್ನ ಹೆಂಡತಿಗೆ ತಿಳಿಯದ್ದಾಗಿದೆ; ನನ್ನ ಹೊಟ್ಟೆಯ ಮಕ್ಕಳನ್ನು ಬೇಡುತ್ತೇನೆ.

Job 19:17 (UKJV) My breath is strange to my wife, though I implored for the children's sake of mine own body.

15ನನ್ನ ಮನೆಯಲ್ಲಿ ತಂಗುವವರೂ ನನ್ನ ದಾಸಿಗಳೂ ನನ್ನನ್ನೂ ಪರನೆಂದು ಎಣಿಸುತ್ತಾರೆ; ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ.

16ನನ್ನ ಸೇವಕನನ್ನು ಕರೆದರೆ, ಅವನು ನನಗೆ ಉತ್ತರ ಕೊಡುವದಿಲ್ಲ; ನನ್ನ ಬಾಯಿಯಿಂದ ಅವನನ್ನು ಬೇಡಿಕೊಳ್ಳಬೇಕಾ ಯಿತು.

17ನನ್ನ ಶ್ವಾಸವು ನನ್ನ ಹೆಂಡತಿಗೆ ತಿಳಿಯದ್ದಾಗಿದೆ; ನನ್ನ ಹೊಟ್ಟೆಯ ಮಕ್ಕಳನ್ನು ಬೇಡುತ್ತೇನೆ.

18ಬಾಲಕರು ಸಹ ನನ್ನನ್ನು ತಿರಸ್ಕರಿಸುತ್ತಾರೆ; ನಾನು ಎದ್ದರೆ ನನಗೆ ಎದುರು ಮಾತಾಡುತ್ತಾರೆ.

19ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಅಸಹ್ಯಿಸುತ್ತಾರೆ; ನಾನು ಪ್ರೀತಿಮಾಡಿದವರೇ ನನಗೆ ವಿರೋಧವಾಗಿ ತಿರುಗಿ ದ್ದಾರೆ.

Kannada Bible (Old Version), Bible Society of India.