3ನನ್ನ ಶ್ವಾಸವು ನನ್ನಲ್ಲಿಯೂ ದೇವರ ಆತ್ಮವು ನನ್ನ ಮೂಗಿ ನಲ್ಲಿಯೂ ಇರುವ ಸರ್ವಕಾಲದ ವರೆಗೂ
4ನನ್ನ ತುಟಿಗಳು ದುಷ್ಟತ್ವವನ್ನು ಮಾತನಾಡವು; ನನ್ನ ನಾಲಿಗೆ ಮೋಸ ನುಡಿಯದು.
5ನಿಮ್ಮನ್ನು ನೀತಿವಂತರೆನ್ನುವದು ನನಗೆ ದೂರವಿರಲಿ; ನಾನು ಸತ್ತು ಹೋಗುವ ವರೆಗೂ ನನ್ನ ಯಥಾರ್ಥತ್ವವನ್ನು ನನ್ನಿಂದ ತೊಲ ಗಿಸುವದಿಲ್ಲ.
6ನನ್ನ ನೀತಿಯನ್ನು ದೃಢವಾಗಿ ಹಿಡು ಕೊಂಡಿದ್ದೇನೆ. ಅದನ್ನು ನಾನು ಹೋಗಗೊಡಿಸು ವದಿಲ್ಲ; ನಾನು ಇರುವ ವರೆಗೂ ನನ್ನ ಹೃದಯವು ನನ್ನನ್ನು ನಿಂದಿಸುವದಿಲ್ಲ.
7ನನ್ನ ಶತ್ರು ದುಷ್ಟನ ಹಾಗಿರಲಿ; ನನಗೆ ವಿರೋಧ ವಾಗಿ ಏಳುವವನು ಅನ್ಯಾಯವಂತನ ಹಾಗಿರಲಿ.