27ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;
28ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು.
29ಇಗೋ, ಇವೆಲ್ಲವುಗಳನ್ನು ಅನೇಕ ಸಾರಿ ಮನು ಷ್ಯನಿಗೆ ಮಾಡುತ್ತಾನೆ.
30ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.
31ಓ ಯೋಬನೇ, ಚೆನ್ನಾಗಿ ಗುರುತಿಸು; ನನ್ನ ಮಾತಿಗೆ ಕಿವಿಗೊಡು. ಮೌನವಾಗಿರು, ನಾನು ಮಾತನಾಡು ತ್ತೇನೆ.