16ನಿನ್ನನ್ನು ಆತನು ಹಾಗೆಯೇ ಇಕ್ಕಟ್ಟಿನೊಳಗಿಂದ ತೆಗೆದು ಇಕ್ಕಟ್ಟಿಲ್ಲದ ವಿಶಾಲವಾದ ಸ್ಥಳಕ್ಕೆ ಬರಮಾಡ ಬಹುದಾಗಿತ್ತು; ನಿನ್ನ ಮೇಜಿನ ಮೇಲೆ ಇಡತಕ್ಕವುಗಳು ಕೊಬ್ಬಿನಿಂದ ತುಂಬಿದವುಗಳಾಗಿರುವವು.
17ಆದರೆ ನೀನು ದುಷ್ಟನ ನ್ಯಾಯವನ್ನು ಪೂರೈಸಿದಿ; ನ್ಯಾಯವೂ ತೀರ್ಪೂ ನಿನ್ನನ್ನು ಹಿಡಿಯುವವು.
18ರೌದ್ರ ಉಂಟು, ಅವನು ನಿನ್ನನ್ನು ಒಂದೇ ಪೆಟ್ಟಿನಿಂದ ಒಯ್ಯದ ಹಾಗೆ ನೋಡು; ದೊಡ್ಡ ವಿಮೋಚನೆಯ ಕ್ರಯ ನಿನ್ನನ್ನು ಬಿಡಿಸದು.
19ಅವನು ನಿನ್ನ ಐಶ್ವರ್ಯವನ್ನು ಲೆಕ್ಕಿಸು ವನೋ? ಬಂಗಾರವನ್ನೂ ಬಲದ ಎಲ್ಲಾ ಶಕ್ತಿಗಳನ್ನೂ ಲೆಕ್ಕಿಸನು.
20ಜನಗಳು ತಮ್ಮ ಸ್ಥಳದಲ್ಲಿ ಒಡೆಯಲ್ಪಡುವ ರಾತ್ರಿಯನ್ನು ಬಯಸಬೇಡ.