3ನಾನು ಸಹ ವ್ಯರ್ಥವಾದ ತಿಂಗಳುಗಳನ್ನು ಬಾಧ್ಯವಾಗಿ ತಕ್ಕೊಳ್ಳಬೇಕಾಯಿತು; ಬೇಸರಿಕೆಯ ರಾತ್ರಿ ಗಳು ನನಗೆ ನೇಮಿಸಲ್ಪಟ್ಟವು.
4ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೆಂದೂ ರಾತ್ರಿ ಬೆಳೆಯುತ್ತಾ ಹೋಗು ತ್ತದೆಂದೂ ಅಂದೆನು. ಉದಯದ ವರೆಗೆ ಹೊರಳಾ ಡುವದು ನನಗೆ ಸಾಕಾಗುತ್ತದೆ
5ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ.
6ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ನಿರೀಕ್ಷೆ ಇಲ್ಲದೆ ಅವು ಮುಗಿಯುತ್ತವೆ.
7ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು.