11ಇಗೋ, ಆತನು ನನ್ನ ಮುಂದೆ ಹಾದುಹೋಗು ತ್ತಾನೆ. ನನಗೆ ಆತನು ಕಾಣುವದಿಲ್ಲ. ಆತನು ದಾಟಿ ಹೋಗುತ್ತಾನೆ, ಆದರೆ ನಾನು ಆತನನ್ನು ಗ್ರಹಿಸಿ ಕೊಳ್ಳುವದಿಲ್ಲ.
12ಇಗೋ, ಆತನು ತೆಗೆದುಕೊಂಡು ಹೋಗುತ್ತಾನೆ. ಆತನಿಗೆ ಅಡ್ಡಿಮಾಡುವವರು ಯಾರು? ಆತನನ್ನು--ನೀನು ಏನು ಮಾಡುತ್ತೀ ಎಂದು ಕೇಳುವ ವರಾರು?
13ದೇವರು ತನ್ನ ಕೋಪವನ್ನು ಹಿಂತೆಗೆಯ ದಿದ್ದರೆ ಸೊಕ್ಕಿನ ಸಹಾಯಕರು ಆತನ ಕೆಳಗೆ ಬೊಗ್ಗಿ ಕೊಳ್ಳುತ್ತಾರೆ.
14ಆತನಿಗೆ ಉತ್ತರ ಕೊಡುವದಕ್ಕೂ ಆತನೊಂದಿಗೆ ತರ್ಕಿಸುವದಕ್ಕೆ ನನ್ನ ಮಾತುಗಳನ್ನು ಆದುಕೊಳ್ಳು ವದಕ್ಕೂ ನಾನು ಎಷ್ಟು ಮಾತ್ರದವನು;
15ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.