16ನಾನು ಕರೆ ಯಲು ಆತನು ನನಗೆ ಉತ್ತರಕೊಟ್ಟರೂ ಆತನು ನನ್ನ ಶಬ್ಧಕ್ಕೆ ಕಿವಿಗೊಡುತ್ತಾನೆಂದು ನಂಬಲಾರೆನು.
17ಆತನು ಬಿರುಗಾಳಿಯಿಂದ ನನ್ನನ್ನು ಚೂರು ಮಾಡು ತ್ತಾನೆ. ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸು ತ್ತಾನೆ.
18ನನ್ನ ಉಸಿರು ತಕ್ಕೊಳ್ಳದಂತೆ ಮಾಡಿ ಕಹಿ ಯಾದವುಗಳಿಂದ ನನ್ನನ್ನು ತುಂಬಿಸುತ್ತಾನೆ.
19ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
20ನನ್ನನ್ನು ನಾನು ನೀತಿವಂತನನ್ನಾಗಿ ಮಾಡಿ ಕೊಂಡರೆ ನನ್ನ ಸ್ವಂತ ಬಾಯಿ ನನ್ನನ್ನು ಖಂಡಿಸುತ್ತದೆ. ನಾನು ಸಂಪೂರ್ಣನಾಗಿದ್ದೇನೆಂದು ಹೇಳಿದರೆ ನಾನು ವಕ್ರನಾಗಿದ್ದೇನೆಂದು ಅದು ಸಿದ್ಧಾಂತಮಾಡುವದು.