ಯಜ್ಞದೀಕ್ಷಾನಿರ್ಣಯ 11

ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ಭೂಮಿಯ ಮೇಲೆ ಇರುವ ಎಲ್ಲಾ ಪಶುಗಳಲ್ಲಿ ನೀವು ತಿನ್ನಬೇಕಾದವುಗಳು ಇವೇ:

Leviticus 11:2 (UKJV) Speak unto the children of Israel, saying, These are the beasts which all of you shall eat among all the beasts that are on the earth.

11 ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಅವರಿಗೆ ಹೇಳಿದ್ದೇನಂದರೆ

2ಇಸ್ರಾಯೇಲನ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ಭೂಮಿಯ ಮೇಲೆ ಇರುವ ಎಲ್ಲಾ ಪಶುಗಳಲ್ಲಿ ನೀವು ತಿನ್ನಬೇಕಾದವುಗಳು ಇವೇ:

3ಪಶುಗಳಲ್ಲಿ ಕಾಲ್ಗೊರಸು ಸೀಳಿದ್ದಾಗಿದ್ದು ಮೇವನ್ನು ಮೆಲುಕಾಡಿಸುವದನ್ನು ನೀವು ತಿನ್ನಬೇಕು.

4ಮೇವನ್ನು ಮೆಲುಕಾಡಿಸದ ಇಲ್ಲವೆ ಗೊರಸು ಸೀಳದಿರುವ ಯಾವದನ್ನೂ ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವದಾದರೂ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿದೆ.

Kannada Bible (Old Version), Bible Society of India.