ಲೂಕ 17

ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.

Luke 17:14 (UKJV) And when he saw them, he said unto them, Go show yourselves unto the priests. And it came to pass, that, as they went, they were cleansed.

12ಆತನು ಒಂದಾ ನೊಂದು ಹಳ್ಳಿಯನ್ನು ಪ್ರವೇಶಿಸಿದಾಗ ಹತ್ತು ಮಂದಿ ಕುಷ್ಠರೋಗಿಗಳು ದೂರದಲ್ಲಿ ನಿಂತು ಆತನನ್ನು ಸಂಧಿಸಿ ದರು.

13ಅವರು ತಮ್ಮ ಸ್ವರವೆತ್ತಿ--ಯೇಸುವೇ,ಒಡೆಯನೇ, ನಮ್ಮ ಮೇಲೆ ಕರುಣೆಯಿಡು ಎಂದು ಕೂಗಿ ಹೇಳಿದರು.

14ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.

15ಅವರಲ್ಲಿ ಒಬ್ಬನು ತಾನು ಸ್ವಸ್ಥ ವಾದದ್ದನ್ನು ನೋಡಿ ಹಿಂದಿರುಗಿ ಬಂದು ಮಹಾ ಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ

16ಆತನ ಪಾದಕ್ಕೆ ಅಡ್ಡಬಿದ್ದು ಆತನಿಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಿದನು; ಅವನು ಸಮಾರ್ಯದವನಾಗಿದ್ದನು.

Kannada Bible (Old Version), Bible Society of India.