ಲೂಕ 24

ಆಗ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟದ್ದನ್ನು ಅವರು ಕಂಡರು.

Luke 24:2 (UKJV) And they found the stone rolled away from the tomb.

1​ವಾರದ ಮೊದಲನೆಯ ದಿನದ ಬೆಳಗಿನ ಜಾವದಲ್ಲಿ ಅವರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತಕ್ಕೊಂಡು ಬಂದರು. ಬೇರೆ ಕೆಲವರು ಅವರೊಂದಿಗಿದ್ದರು.

2ಆಗ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟದ್ದನ್ನು ಅವರು ಕಂಡರು.

3ಅವರು ಒಳಗೆ ಪ್ರವೇಶಿಸಿದಾಗ ಅಲ್ಲಿ ಕರ್ತನಾದ ಯೇಸುವಿನ ದೇಹ ವನ್ನು ಕಾಣಲಿಲ್ಲ.

4ಅವರು ಇದಕ್ಕಾಗಿ ಬಹಳವಾಗಿ ಕಳವಳಗೊಂಡರು; ಆಗ ಇಗೋ, ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತಿದ್ದರು.

Kannada Bible (Old Version), Bible Society of India.