10ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
11ಕರ್ತನಿಗೆ ವಿರೋಧವಾಗಿ ದುರಾ ಲೋಚನೆ ಮಾಡಿ ಕೇಡನ್ನು ಯೋಚಿಸುವವನು ನಿನ್ನೊಳ ಗಿಂದ ಹೊರಟಿದ್ದಾನೆ.
12ಕರ್ತನು ಹೀಗೆ ಹೇಳು ತ್ತಾನೆ--ಅವರು ಸುಖವುಳ್ಳವರಾಗಿಯೂ ಬಹು ಮಂದಿ ಯಾಗಿಯೂ ಇದ್ದರೂ ಆತನು ಹಾದುಹೋಗುವಾಗ ಹೀಗೆ ಕಡಿಯಲ್ಪಡುವರು; ನಾನು ನಿನ್ನನ್ನು ಕಷ್ಟಪಡಿಸಿ ದಾಗ್ಯೂ ಇನ್ನು ಮೇಲೆ ಕಷ್ಟಪಡಿಸೆನು.
13ಆದರೆ ನಾನು ಈಗ ನಿನ್ನ ಮೇಲಿಂದ ಆತನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಡುವೆನು.
14ನಿನ್ನ ವಿಷಯವಾಗಿ ಕರ್ತನು ಆಜ್ಞಾಪಿಸುವದೇ ನಂದರೆ--ನಿನ್ನ ಹೆಸರುಳ್ಳವರು ಇನ್ನು ಬಿತ್ತಲ್ಪಡರು; ನಿನ್ನ ದೇವರುಗಳ ಮನೆಯೊಳಗಿಂದ ಕೆತ್ತಿದ ವಿಗ್ರಹ ವನ್ನೂ ಎರಕ ಹೊಯಿದದ್ದನ್ನೂ ಕಡಿದುಬಿಡುವೆನು; ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.