ಫಿಲಿಪ್ಪಿ 2

ಆದದ ರಿಂದ ನೀವು ಅವನನ್ನು ನೋಡಿ ತಿರಿಗಿ ಸಂತೋಷಪಡ ಬೇಕೆಂತಲೂ ನನಗೆ ಕೂಡ ದುಃಖವು ಕಡಿಮೆಯಾಗ ಬೇಕೆಂತಲೂ ನಾನು ಅವನನ್ನು ಬಹಳ ಜಾಗ್ರತೆಯಿಂದ ಕಳುಹಿಸಿದ್ದೇನೆ.

Philippians 2:28 (UKJV) I sent him therefore the more carefully, that, when all of you see him again, all of you may rejoice, and that I may be the less sorrowful.

26ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು, ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ತುಂಬಾ ವ್ಯಸನಪಟ್ಟನು.

27ಅವನು ರೋಗದಲ್ಲಿ ಬಿದ್ದು ಸಾಯುವಹಾಗಿದ್ದನೆಂಬದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನೂ ಕರುಣಿಸಿದನು.

28ಆದದ ರಿಂದ ನೀವು ಅವನನ್ನು ನೋಡಿ ತಿರಿಗಿ ಸಂತೋಷಪಡ ಬೇಕೆಂತಲೂ ನನಗೆ ಕೂಡ ದುಃಖವು ಕಡಿಮೆಯಾಗ ಬೇಕೆಂತಲೂ ನಾನು ಅವನನ್ನು ಬಹಳ ಜಾಗ್ರತೆಯಿಂದ ಕಳುಹಿಸಿದ್ದೇನೆ.

29ಆದದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.

30ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿ ಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯ ಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವಹಾಗಿದ್ದನು.

Kannada Bible (Old Version), Bible Society of India.