16ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
17ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ.
18ಬಾ, ಬೆಳಗಿನ ವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಳ್ಳುವ ಕಾಮ ವಿಲಾಸಗಳಿಂದ ನಮ್ಮನ್ನು ನಾವು ಆದರಿಸಿಕೊಳ್ಳೋಣ.
19ಯಜಮಾ ನನು ಮನೆಯಲ್ಲಿ ಇಲ್ಲ; ಅವನು ದೀರ್ಘದ ಪ್ರಯಾಣ ಕೈಕೊಂಡಿದ್ದಾನೆ.
20ಅವನು ತನ್ನೊಂದಿಗೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ; ನೇಮಕ ವಾದ ದಿನದಲ್ಲಿಯೇ ಅವನು ಈ ಮನೆಗೆ ಬರುವವನಾ ಗಿದ್ದಾನೆ ಎಂದು