ಸ್ತುತಿಗಳು 109

ನನ್ನ ಪ್ರೀತಿಗೆ ಬದಲಾಗಿ ನನ್ನನ್ನು ಎದುರಿಸುತ್ತಾರೆ; ಆದರೆ ನಾನು ಪ್ರಾರ್ಥನೆಯಲ್ಲಿಯೇ ಇದ್ದೇನೆ.

Psalm 109:4 (UKJV) For my love they are my adversaries: but I give myself unto prayer.

2ದುಷ್ಟನ ಬಾಯಿ ಯನ್ನೂ ಮೋಸದ ಬಾಯಿಯನ್ನೂ ನನಗೆ ವಿರೋಧ ವಾಗಿ ತೆರೆದಿವೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.

3ಹಗೆಯ ಮಾತು ಗಳಿಂದ ಅವರು ನನ್ನನ್ನು ಸುತ್ತಿಕೊಂಡು ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧಮಾಡಿದ್ದಾರೆ.

4ನನ್ನ ಪ್ರೀತಿಗೆ ಬದಲಾಗಿ ನನ್ನನ್ನು ಎದುರಿಸುತ್ತಾರೆ; ಆದರೆ ನಾನು ಪ್ರಾರ್ಥನೆಯಲ್ಲಿಯೇ ಇದ್ದೇನೆ.

5ನನ್ನ ಮೇಲಿಗೆ ಬದಲಾಗಿ ಕೇಡನ್ನೂ ಪ್ರೀತಿಗೆ ಬದಲಾಗಿ ಹಗೆಯನ್ನೂ ನನಗೆ ವಿರೋಧ ವಾಗಿ ಮಾಡಿದ್ದಾರೆ.

6ದುಷ್ಟನನ್ನು ಅವನ ಮೇಲೆ ನೇಮಿಸು; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.

Kannada Bible (Old Version), Bible Society of India.