ಸ್ತುತಿಗಳು 118

ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.

Psalm 118:26 (UKJV) Blessed be he that comes in the name of the LORD: we have blessed you out of the house of the LORD.

24ಕರ್ತನು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡುವೆವು.

25ಓ ಕರ್ತನೇ, ರಕ್ಷಿಸಬೇಕು ಎಂದು ನಾನು ನಿನ್ನನ್ನು ಬೇಡುತ್ತೇನೆ. ಓ ಕರ್ತನೇ, ಅಭಿವೃದ್ಧಿಯನ್ನು ಕೊಡು ಎಂದು ನಿನ್ನನ್ನು ಬೇಡುತ್ತೇನೆ.

26ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.

27ದೇವರು ಕರ್ತನಾಗಿದ್ದಾನೆ. ಆತನು ನಮಗೆ ಬೆಳಕನ್ನು ತೋರಿಸಿದ್ದಾನೆ. ಬಲಿ (ಪಶುವನ್ನು) ಹಗ್ಗಗಳಿಂದ ಕಟ್ಟಿ ಬಲಿಪೀಠದ ಕೊಂಬುಗಳಿಗೆ ಕಟ್ಟಿರಿ,

28ನೀನು ನನ್ನ ದೇವರಾಗಿದ್ದೀ; ನಿನ್ನನ್ನು ಕೊಂಡಾಡುವೆನು; ನನ್ನ ದೇವರೇ, ನಿನ್ನನ್ನು ಘನಪಡಿಸುವೆನು.

Kannada Bible (Old Version), Bible Society of India.