ಸ್ತುತಿಗಳು 139

ನೀನು ನನ್ನ ಅಂತರಿಂದ್ರಿಯಗಳನ್ನು ರೂಪಿಸಿದ್ದೀ; ನನ್ನ ತಾಯಿಯ ಗರ್ಭದಲ್ಲಿ ನೀನು ನನ್ನನ್ನು ಮುಚ್ಚಿದ್ದೀ.

Psalm 139:13 (UKJV) For you have possessed my reins: you have covered me in my mother's womb.

11ನಿಶ್ಚಯವಾಗಿ ಕತ್ತಲೆಯು ನನ್ನನ್ನು ಕವಿದು ಕೊಳ್ಳುವದೆಂದು ನಾನು ಹೇಳಿದರೆ ರಾತ್ರಿಯು ನನ್ನ ಸುತ್ತಲೂ ಬೆಳಕಾಗಿರುವದು.

12ಕರ್ತನೇ, ಕತ್ತಲೆಯು ನಿನಗೆ ಕಾಣದಂತೆ ಮುಚ್ಚುವದಿಲ್ಲ; ರಾತ್ರಿಯು ಹಗಲಿನ ಹಾಗೆ ಬೆಳಗುವದು; ಕತ್ತಲೂ ಬೆಳಕೂ ನಿನಗೆ ಒಂದೇ ಆಗಿವೆ.

13ನೀನು ನನ್ನ ಅಂತರಿಂದ್ರಿಯಗಳನ್ನು ರೂಪಿಸಿದ್ದೀ; ನನ್ನ ತಾಯಿಯ ಗರ್ಭದಲ್ಲಿ ನೀನು ನನ್ನನ್ನು ಮುಚ್ಚಿದ್ದೀ.

14ನಾನು ಭಯಭರಿತನಾಗಿಯೂ ಅದ್ಭುತ ವಾಗಿಯೂ ಮಾಡಲ್ಪಟ್ಟದ್ದರಿಂದ ನಿನ್ನನ್ನು ಕೊಂಡಾ ಡುತ್ತೇನೆ; ನಿನ್ನ ಕೆಲಸಗಳು ಅದ್ಭುತಗಳಾಗಿವೆ ಎಂದು ನನ್ನ ಮನಸ್ಸಿಗೆ ಚೆನ್ನಾಗಿ ತಿಳಿದಿದೆ;

15ನಾನು ಮರೆ ಯಲ್ಲಿ ಮಾಡಲ್ಪಟ್ಟಾಗಲೂ ಭೂಮಿಯ ಅಧೋ ಭಾಗಗಳಲ್ಲಿ ವಿಚಿತ್ರವಾಗಿ ಮಾಡಲ್ಪಟ್ಟಾಗಲೂ ನನ್ನ ಅಸ್ತಿತ್ವವು ನಿನಗೆ ಮರೆಯಾಗಿರಲಿಲ್ಲ.

Kannada Bible (Old Version), Bible Society of India.