ಸ್ತುತಿಗಳು 46

ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

Psalm 46:7 (UKJV) The LORD of hosts is with us; the God of Jacob is our refuge. Selah.

5ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು.

6ಅನ್ಯ ಜನಾಂಗವು ಘೋಷಿಸಿತು, ರಾಜ್ಯಗಳು ಕದಲಿದವು; ಆತನು ತನ್ನ ಧ್ವನಿಯನ್ನೆತ್ತಿ ಕೂಗಿದಾಗ ಭೂಮಿಯು ಕರಗಿತು.

7ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

8ಬನ್ನಿರಿ, ಕರ್ತನ ಕಾರ್ಯಗಳನ್ನು ದೃಷ್ಟಿಸಿರಿ. ಆತನು ಭೂಮಿಯಲ್ಲಿ ಎಂಥಾ ನಾಶನಗಳನ್ನು ನಡಿಸಿದ್ದಾನೆ;

9ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ.

Kannada Bible (Old Version), Bible Society of India.