5ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
6ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.
7ದುಃಖದಿಂದ ನನ್ನ ಕಣ್ಣು ಬತ್ತಿ ಹೋಗಿದೆ. ನನ್ನ ಸಕಲ ವೈರಿಗಳಿಂದ ಅದು ಡೊಗರುಬಿದ್ದಿದೆ.
8ಅಕ್ರಮ ಮಾಡುವವರೇ, ನನ್ನ ಬಳಿಯಿಂದ ತೊಲ ಗಿರಿ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ;
9ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ; ಕರ್ತನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.