ಸ್ತುತಿಗಳು 61

ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.

Psalm 61:2 (UKJV) From the end of the earth will I cry unto you, when my heart is overwhelmed: lead me to the rock that is higher than I.

11 ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.

2ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.

3ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;

4ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.

Kannada Bible (Old Version), Bible Society of India.