7ದೇವರಲ್ಲಿಯೇ ನನ್ನ ರಕ್ಷಣೆಯೂ ಘನವೂ ಇದೆ; ನನ್ನ ಬಲದ ಬಂಡೆಯೂ ನನ್ನ ಆಶ್ರಯವೂ ದೇವರಲ್ಲಿಯೇ.
8ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
9ನಿಶ್ಚಯವಾಗಿ ಅಲ್ಪರು ವ್ಯರ್ಥರೇ, ಘನವಂತರು ಸುಳ್ಳೇ; ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿದರೆ ಧೂಳಿ ಗಿಂತಲೂ ಲಘುವಾಗಿದ್ದಾರೆ.
10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.
11ಅಧಿಕಾರವು ದೇವರದೆಂದು ಆತನು ಒಂದು ಸಾರಿ ಮಾತನಾಡಿದ್ದನ್ನು; ನಾನು ಎರಡು ಸಾರಿ ಕೇಳಿದ್ದೇನೆ; ಶಕ್ತಿಯು ದೇವರಿಗೆ ಸಂಬಂಧಪಟ್ಟದ್ದು.