ಸ್ತುತಿಗಳು 62

ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.

Psalm 62:10 (UKJV) Trust not in oppression, and become not vain in robbery: if riches increase, set not your heart upon them.

8ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

9ನಿಶ್ಚಯವಾಗಿ ಅಲ್ಪರು ವ್ಯರ್ಥರೇ, ಘನವಂತರು ಸುಳ್ಳೇ; ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿದರೆ ಧೂಳಿ ಗಿಂತಲೂ ಲಘುವಾಗಿದ್ದಾರೆ.

10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.

11ಅಧಿಕಾರವು ದೇವರದೆಂದು ಆತನು ಒಂದು ಸಾರಿ ಮಾತನಾಡಿದ್ದನ್ನು; ನಾನು ಎರಡು ಸಾರಿ ಕೇಳಿದ್ದೇನೆ; ಶಕ್ತಿಯು ದೇವರಿಗೆ ಸಂಬಂಧಪಟ್ಟದ್ದು.

12ಓ ಕರ್ತನೇ, ನಿನ್ನಲ್ಲಿ ಕರುಣೆಯುಂಟು; ನೀನು ಪ್ರತಿ ಮನುಷ್ಯನಿಗೆ ಅವನ ಕೆಲಸದ ಪ್ರಕಾರ ಪ್ರತಿಫಲ ಕೊಡುತ್ತೀ.

Kannada Bible (Old Version), Bible Society of India.